ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕು ತಿಂಗಳಷ್ಟೇ ಸಮಯ ಇದೆ. ಈ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡದಿಂದ ಉಪೇಂದ್ರ ಸಂದರ್ಶನ ಮಾಡಲಾಗಿದೆ. ಈ ವರೆಗಿನ ಚುನಾವಣೆ ಸಮೀಕ್ಷೆಗಳ ಪ್ರಕಾರ ಕೆಪಿಜೆಪಿಯು ಯಾವುದೇ ಸ್ಥಾನ ಗಳಿಸುವುದಿಲ್ಲ ಅಂತಲೇ ಬರುತ್ತಿದೆ. ಈ ಬಗ್ಗೆ ನೀವೇನಂತೀರಾ ಎಂಬ ಪ್ರಶ್ನೆಗೆ ಈ ಮೇಲಿನಂತೆ ಉಪೇಂದ್ರ ಉತ್ತರಿಸಿದರು.

ಮನೆಯ ಮಹಡಿಯ ಮೇಲೆ ಸೋಫಾದಲ್ಲಿ ಕುಳಿತಿದ್ದ ಉಪೇಂದ್ರ ಎದುರು ತಾಲೀಮಿಗೆ ಅಂತಲೇ ಇದ್ದ ಜಿಮ್ ನ ಸಲಕರಣೆಗಳಿದ್ದವು. ಅಲ್ಲೊಂದು ಬೋರ್ಡ್ ಮೇಲೆ ನಾನು+ನಾನು+ನಾನು= ನಾವು ಎಂಬ ಒಕ್ಕಣೆ. ಬಜೆಟ್ ಬಗ್ಗೆ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆ ಓದಿಕೊಳ್ಳುತ್ತಿದ್ದ ಅವರು, ನಮಗೆ ಸಂದರ್ಶನ ನೀಡುವ ಸಲುವಾಗಿಯೇ ಸ್ವಲ್ಪ ಬಿಡುವಾದರು.

ಇದೇ ಹೊತ್ತಿಗೆ ಕೆಪಿಜೆಪಿಯಿಂದ ಸ್ಪರ್ಧಿಸಲು ಬಯಸಿದ ಆಕಾಂಕ್ಷಿಗಳ ಸಂದರ್ಶನ ಕೂಡ ನಡೆಯುತ್ತಲೇ ಇತ್ತು. "ಮೊದಲ ಸುತ್ತಿನ ಸಂದರ್ಶನ ನಡೆದ ಮೇಲೆ, ಫೈನಲ್ ಆಗಿ ನಾನೊಂದು ಸಲ ಮಾತನಾಡಿಸ್ತೀನಿ" ಎಂದರು ಉಪೇಂದ್ರ.
founder of prajakeeya Upendra spoke with Oneindia and talked about his future plans and interview process for applicants for the party